ಹಿರಿಯ ಪತ್ರಕರ್ತ ರವಿ ಬೆಳಗೆರೆ ತನ್ನ ಬರವಣಿಗೆ ತನಿಖಾ ಚಾಕಚಕ್ಯತೆ ಯಿಂದ ರಾಜ್ಯದಲ್ಲಿ ಖ್ಯಾತ ಪತ್ರಕರ್ತ ಎನ್ನುವ ಹೆಸರು ಪಡೆದಿದ್ದಾರೆ. ತನ್ನದೇ ಆದಂತಹ ಹಾಯ್ ಬೆಂಗಳೂರ್ ವಾರಪತ್ರಿಕೆಯ ಸಂಪಾದಕರಾಗಿ ಮುನ್ನಡೆಸುತ್ತಿದ್ದಾರೆ.  ಇದೀಗ ಇವರು ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ಪತ್ರಿಕೋದ್ಯಮ, ಬರವಣಿಗೆ, ಯೂ ಟ್ಯೂಬ್, ಶಾಲೆ, ಸಿನಿಮಾ ಹೀಗೆ ನಾನಾಕ್ಷೇತ್ರಗಳಲ್ಲಿ ಬ್ಯುಸಿ ಇರುವ ರವಿ ಬೆಳಗೆರೆ ಈಗ ಬಿಗ್ ಬಾಸ್ ಗೂ ಎಂಟ್ರಿ ಕೊಡುವುದು ಖಚಿತವಾಗಿದೆ.ಇದರ ಬೆನ್ನಲೆ ಈಗ ರವಿ ಬೆಳಗೆರೆ ಬೆಳ್ ಬೆಳಗ್ಗೆ ಫೇಸ್ ಬುಕ್ ನಲ್ಲಿ ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.

ಆದ್ರೆ ಸ್ಟೇಟಸ್ ಹಾಕಿ ಕೆಲವೆ ಕ್ಷಣದಲ್ಲಿ ಡಿಲಿಟ್ ಮಾಡಿದ್ದಾರೆಬಿಗ್ ಬಾಸ್ ಮನೆಗೆ ರವಿ ಬೆಳಗೆರೆ 'ಹಾಯ್' ಹೇಳುವುದು ಕನ್ಫರ್ಮ್ ಅಂದ್ಹಾಗೆ ರವಿ ಬೆಳಗೆರೆ ಫೇಸ್ ಬುಕ್ ನಲ್ಲಿ "ಪ್ರಿಯರೆ, ನಾನು ಕೆಲವಷ್ಟು ದಿನಗಳ ತನಕ ನಿಗೂಢ ಲೋಕಕ್ಕೆ ಹೋಗುತ್ತಿದ್ದೇನೆ, ಹೀಗಾಗಿ ಕೆಲಕಾಲ ನಾನು ಫೋನಿಗೆ, ಫೇಸ್ಬುಕ್ ಗೆ, ಆಫೀಸಿನಲ್ಲಿನ ಭೇಟಿಗೆ ಸಿಗುವುದಿಲ್ಲ. ನಿಗೂಢ ವಾಸ ಮುಗಿ ಬಂದ ಮೇಲೆ ಎಂದಿನಂತೆ ನಮ್ಮ ಸಲ್ಲಾಪ ಜಾರಿ" ಎಂದು ಬರೆದುಕೊಂಡಿದ್ದರು. 
 
ಕುತೂಹಲ ಮೂಡಿಸಿದೆ ರವಿ ಬೆಳೆಗೆರೆ ಎಂಟ್ರಿ ಈ ಬಾರಿಯ ಬಿಗ್ ಬಾಸ್ ನಲ್ಲಿ ರವಿ ಬೆಳಗೆರೆ ಕಾಣಿಸಿಕೊಳ್ಳುವುದು ಪಕ್ಕ ಅಂದಮೇಲೆ ಬಿಗ್ ಮನೆ ಹೇಗಿರಲಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಬಿಗ್ ಮನೆಯ ಗಲಾಟೆ, ಕಿತ್ತಾಟ, ರಂಪಾಟ, ಗಾಸಿಪ್ ಎಲ್ಲಾ ಸಾಮಾನ್ಯ. ಈ ಮನೆಗೆ ರವಿ ಬೆಳಗೆರೆ ಪ್ರವೇಶದಿಂದ ಬಿಗ್ ಮನೆ ಆಟ ಮತ್ತಷ್ಟು ರಂಗೇರುವುದರಲ್ಲಿ ಸಂಶಯವೇ ಇಲ್ಲ. ರವಿ ಬೆಳಗೆರೆ ಅವರು ತತ್ವಜ್ಞಾನ ಮತ್ತು ಮನಶ್ಶಾಸ್ತ್ರ ಸಹ ಅರಿತಿದ್ದು ಯಾರ ಜೊತೆಗೆ ಹೇಗೆ ಇರಬೇಕು, ಯಾವ ಕೆಲಸ ಮಾಡಬೇಕು ಬಲ್ಲವರಾಗಿದ್ದಾರೆ. ಆದ್ದರಿಂದ ಗೆಲ್ಲುವ ಚಾನ್ಸಾಸ್  ಹೆಚ್ಚಾಗಿದೆ.


మరింత సమాచారం తెలుసుకోండి: