ಬೆಳಗಾವಿ: ವಿದ್ಯುತ್ ಇದ್ದು, ಎ. ಸಿ ಆನ್ ಮಾಡಿದರು ಸಭೆಗೆ ಭಾರದ ಅಧಿಕಾರಿಗಳು, ಬಂದರೂ ಕಾಟಾಚಾರಕ್ಕೆ ಸಭೆಗಳನ್ನು ನಡೆಸುವ ಅಧಿಕಾರಿಗಳನ್ನು , ಶಾಸಕರು, ಸಚಿವರನ್ನು ನೀವೆಲ್ಲಾ ನೋಡಿರುತ್ತೀರಾ ಆದರೆ ಈ ಸಚಿವರು ವಿದ್ಯುತ್ ಇಲ್ಲದಾಗ ಮೊಬೈಲ್ ಟಾರ್ಚ್ ಹಿಡಿದು ಸಭೆ ನಡೆಸಿ ವಾವ್ಹ್ ಎನ್ನಿಸಿಕೊಂಡಿದ್ದಾರೆ. 


ರಾಜ್ಯದ ಸಕ್ಕರೆ ಸಚಿವರಾದ ಸಿ.ಟಿ. ರವಿ ಅವರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೊಬೈಲ್ ಬೆಳಕಿನಲ್ಲೇ ಸಭೆ ನಡೆಸಿದರು. ಸಕ್ಕರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಬಗ್ಗೆ ಸಭೆ ನಡೆಸುತ್ತಿದ್ದಾಗ ಸಂಜೆಯಾಗಿತ್ತು. ಸುಮಾರು 6.45 ರಷ್ಟೊತ್ತಿಗೆ ವಿದ್ಯುತ್ ಕಡಿತವಾದಾಗ ಸಭಾಭವನದಲ್ಲಿ ಕತ್ತಲೆ ಆವರಿಸಿತು. ಮೊಬೈಲ್ ಬೆಳಕಿನಲ್ಲೇ ಸಭೆ ಮುಂದುವರಿಸಿದ ಸಚಿವ ಸಿ.ಟಿ. ರವಿ ಅಧಿಕಾರಿಗಳಿಂದ ವಿವರ ಪಡೆದರು. ಎರಡು ನಿಮಿಷ ಬಳಿಕ ವಿದ್ಯುತ್ ಬಂದಿತು.


ಕೇಂದ್ರ, ರಾಜ್ಯ, ಕಬ್ಬು ಬೆಳೆಗಾರರು, ಕಾರ್ಖಾನೆ ಮಾಲೀಕರು ಸೇರಿ ಸಕ್ಕರೆ ಸ್ಥಿರ ನಿಧಿ ಸ್ಥಾಪಿಸಬೇಕು ಎನ್ನುವ ಬಗ್ಗೆ ತೀರ್ಮಾನ ಆಗಬೇಕು. ಹೊರ ರಾಜ್ಯಕ್ಕೆ ಕಬ್ಬು ರಪ್ತು ನಿಷೇಧ ಮಾಡಬೇಕು ಎನ್ನುವ ಬಗ್ಗೆ ಪರಿಶೀಲಿಸುವುದಾಗಿ ಸಚಿವರು ಹೇಳಿದರು.
ರಾಜ್ಯದಲ್ಲಿ ಒಟ್ಟು 26 ಮಿಲಿಯನ್ ಟನ್ ಬೇಡಿಕೆ ಇದೆ. ಆದರೆ, 28, 29 ಮಿಲಿಯನ್ ಟನ್ ಉತ್ಪಾದನೆ ಇದೆ. ಹಾಗಾಗಿ ಸಮಸ್ಯೆ ಎಂದು ಸಚಿವ ಸಿಟಿ ರವಿ ತಿಳಿಸಿದರು.


ಇದರ ಜೊತೆಗೆಯೇ  ರಾಷ್ಟದ್ಯಂತ ಅಯೋದ್ಯ ತೀರ್ಪಿಗಾಗಿ ಕಾಯುತ್ತಿರುವ ಜನರಿಗೆ ಸಿಹಿ ಸುದ್ದಿ ನೀಡಿದರು. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಖಚಿತ ಎಂಬ ಭರವಸೆ ನೀಡದರು. ಆಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಮಂದಿರ ನಿರ್ಮಾಣ ಆಗುವುದು ಬಿಜೆಪಿಯ ಹಲವು ವರ್ಷಗಳ ಕನಸು. ಹೀಗಾಗಿ ತೀರ್ಪು ನಮ್ಮ‌ಪರವಾಗಿ ಬಂದು ಮಂದಿರ ನಿರ್ಮಾಣ ಖಚಿತ ಎಂದು ಸಚಿವ ಸಿ.ಟಿ.‌ರವಿ ಹೇಳಿದರು. ಎಲ್ಲರು  ತೀರ್ಪು ಬರುವುದನ್ನು ಕಾಯುತ್ತಿದ್ದೇವೆ.‌ ಬಿಜೆಪಿ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಿದೆ.‌‌ ಶ್ರೀ ರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣ ಆಗಲಿದೆ ಎಂದು ಹೇಳಿದರು.


మరింత సమాచారం తెలుసుకోండి: