ನವದೆಹಲಿ: ಗೌತಮ್ ಗಂಭೀರ್, ಟೀಂ ಇಂಡಿಯಾದ ಅದ್ಬುತ ಓಪನರ್ ಬ್ಯಾಟ್ಸ್ ಮಾನ್. 2011ರ ವಿಶ್ವಕಪ್ ಫೈನಲಿನಲ್ಲಿ 97 ರನ್ ಭಾರಿಸಿದ್ದ ಗಂಭೀರ್ ಕೊನೆಗೆ ಬೋಲ್ಡ್ ಆಗಿ ಶತಕವಂಚಿತರಾಗಿದ್ದರು. ಇದೀಗ ಇದಕ್ಕೆ ಕಾರಣ ಸ್ವತಹ ಗಂಭೀರ್ ನೀಡಿದ್ದಾರೆ. 
 
ನಾನು 2011ರ ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಶತಕ ವಂಚಿತನಾಗಲು ಮಹೇಂದ್ರ ಸಿಂಗ್ ಧೋನಿ ಕಾರಣ ಎಂದು ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಆರೋಪಿಸಿದ್ದಾರೆ.ಹೌದು, ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 2011ರ ಫೈನಲ್ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 6 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿ ಬರೋಬ್ಬರಿ 28 ವರ್ಷದ ನಂತರ ವಿಶ್ವಕಪ್ ಅನ್ನು ಎತ್ತಿಹಿಡಿದಿತ್ತು. ಈ ಪಂದ್ಯದಲ್ಲಿ ಕೇವಲ ಮೂರು ರನ್‍ಗಳಿಂದ ಶತಕ ವಂಚಿತರಾಗಿದ್ದ ಗೌತಮ್ ಗಂಭೀರ್ ಅವರು, ನಾನು ಶತಕ ವಂಚಿತನಾಗಲು ಅಂದಿನ ನಾಯಕ ಎಂ.ಎಸ್ ಧೋನಿ ಅವರು ಕಾರಣ ಎಂದು ಹೇಳಿದ್ದಾರೆ.
 
ಶತಕವಂಚಿತ ವಿಚಾರವಾಗಿ ಮಾತನಾಡಿರುವ ಗಂಭೀರ್ ಅವರು, ನಾನು ಎಲ್ಲೇ ಹೋದರೂ ಯುವಕರು ಆ ದಿನ ನೀವು ಯಾಕೆ ಶತಕ ಹೊಡೆದಿಲ್ಲ ಎಂದು ಪ್ರಶ್ನಿಸುತ್ತಾರೆ. ನನಗೂ ಯಾವಗಲೂ ಅನ್ನಿಸುತ್ತದೆ. ಆ ಶತಕ ಸಿಡಿಸಿದ್ದರೆ ನನ್ನ ಕ್ರಿಕೆಟ್ ಜೀವನ ಇನ್ನೂ ಚೆನ್ನಾಗಿ ಇರುತಿತ್ತು. ಆದರೆ ನನ್ನ ವೈಯಕ್ತಿಕ ಸ್ಕೋರ್ ಅನ್ನು ಹಚ್ಚಿಸಿಕೊಳ್ಳುವ ಬರದಲ್ಲೇ ನಾನು ಅವತ್ತು ಶತಕವಂಚಿತನಾದೆ ಎಂದು ಹೇಳಿದ್ದಾರೆ.
 
ಆಗನನ್ನ ಗುರಿ ಶ್ರೀಲಂಕಾ ನೀಡಿದ 275ರನ್‍ಗಳನ್ನು ಬೆನ್ನಟ್ಟವುದು ಆಗಿತ್ತು. ಆದರೆ ಆ ಓವರಿನ ಮಧ್ಯದಲ್ಲಿ ನನ್ನ ಬಳಿಗೆ ಬಂದ ಧೋನಿ ಅವರು, ನೀನು ಈಗ 97ರನ್ ಹೊಡೆದಿದ್ದಿ. ಇನ್ನು ಮೂರು ರನ್ ಹೊಡೆದರೆ ಶತಕ ಆಗುತ್ತದೆ ಎಂದು ಹೇಳಿ ನನ್ನ ಗಮನಕ್ಕೆ ತಂದರು. ಆಗ ನನಗೆ ನನ್ನ ವೈಯಕ್ತಿಕ ಸ್ಕೋರ್ ಮೇಲೆ ಗಮನ ಹೆಚ್ಚಾಯ್ತು. ಆದ್ದರಿಂದ ನಾನು ಅಂದು ಔಟ್ ಆದೆ. ಧೋನಿ ಅವರು ಅದನ್ನು ನೆನಪಿಸದೆ ಇದ್ದರೆ ಅವತ್ತು ನಾನು ಶತಕ ಸಿಡಿಸುತ್ತಿದ್ದೆ ಎಂದು ನೆನೆಪಿಸಿಕೊಂಡು ಧೋನಿ ವಿರುದ್ಧ ಗರಂ ಆಗಿದ್ದಾರೆ.

మరింత సమాచారం తెలుసుకోండి: