ಬೆಂಗಳೂರು: ಕ್ರಿಕೆಟ್ ರಸದೌತಣ ನೀಡುವ ಐಪಿಎಲ್ 13ನೇ ಆವೃತ್ತಿಯ ಹರಾಜಿಗೆ ದಿನಗಣನೆ ಶುರುವಾಗಿದೆ. ಇದೇ ಡಿಸೆಂಬರ್ 19 ರಂದು ಮೊದಲ ಬಾರಿ ಕೋಲ್ಕತ್ತಾ ಹರಾಜು ಪ್ರಕ್ರಿಯೆಗೆ ತಯಾರಾಗಿದೆ. ಎಲ್ಲ ಫ್ರಾಂಚೈಸಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಯಾರನ್ನು ಖರೀದಿಸಬೇಕೆಂಬ ಲೆಕ್ಕಾಚಾರಗಳು ಜೋರಾಗಿವೆ. 73 ಸ್ಥಾನಕ್ಕಾಗಿ 332 ಆಟಗಾರರು ಕಾದಾಟ ನಡೆಸಲಿದ್ದಾರೆ. ಈ ಪೈಕಿ ಅತಿ ಕಿರಿಯ ವಯಸ್ಸಿನ ಅಫ್ಘಾನಿಸ್ತಾನ ಆಟಗಾರನ ಮೇಲೆ ಕೆಲವು ಫ್ರಾಂಚೈಸಿ ಕಣ್ಣಿಟ್ಟಿದು ಈ ಯಂಗ್ ಅಂಡ್ ಯನರ್ಜಿಟಿಕ್ ಕ್ರಿಕೆಟ್ ಆಟಗಾರ ಯಾರೆಂದು ನಾವ್ ಹೇಳ್ತೀವಿ ನೋಡಿ. 
 
ಅಫ್ಘಾನಿಸ್ತಾನ ಅಂಡರ್-19 ತಂಡದಲ್ಲಿ ಸಂಚಲನ ಸೃಷ್ಟಿಸಿದ್ದ 14 ವರ್ಷದ ಪೋರ ನೂರ್ ಅಹ್ಮದ್ ಐಪಿಎಲ್ ಹರಾಜಿನಲ್ಲಿ ಲಭ್ಯವಿರುವ ಅತಿ ಕಿರಿಯ ಆಟಗಾರ. ಕಳೆದ ತಿಂಗಳು ಭಾರತ ಅಂಡರ್-19 ತಂಡದ ವಿರುದ್ಧ ಅಹ್ಮದ್ ಅವರು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 9 ವಿಕೆಟ್ ಕಿತ್ತು ಭಾರೀ ಸುದ್ದಿಯಾಗಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ಇವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ರಾಜಸ್ಥಾನ್ ರಾಯಲ್ಸ್ ತಂಡ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಅಂದಾಜಿನಲ್ಲಿದೆ. ಇತ್ತೀಚೆಗಷ್ಟೆ ​​ ಅಹ್ಮದ್ ಅವರನ್ನು ಆರ್​ಆರ್ ತಂಡ ಸಂಪರ್ಕಿಸಿ ಟ್ರಯಲ್ ಕೂಡ ನಡೆಸಿದೆ. 
 
ಜನವರಿ 3, 2005 ರಂದು ಜನಿಸಿದ ನೂರ್ ಅಹ್ಮದ್ ಸ್ಲೋ ಲೆಫ್ಟ್​ ಆರ್ಮ್​ ಚೈನಾಮನ್ ಬೌಲರ್ ಆಗಿದ್ದಾರೆ. ಟಿ-20 ಈವರೆಗೆ 7 ಪಂದ್ಯಗಳನ್ನು ಇವರು ಆಡಿದ್ದು 8 ವಿಕೆಟ್ ಕಿತ್ತಿದ್ದಾರೆ. ಕೇವಲ 12 ರನ್ ನೀಡಿ 3 ವಿಕೆಟ್ ಪಡೆದಿರುವುದು ಅಹ್ಮದ್​ರ ಶ್ರೇಷ್ಠ ಸಾಧನೆಯಾಗಿದೆ.
 
ಈ ಬಾರಿಯ ಐಪಿಎಲ್ ಹರಾಜಿಗೆ 7ವಿದೇಶಿ ಆಟಗಾರರು ತಮ್ಮ ಮೂಲ ಬೆಲೆಯನ್ನು 2ಕೋಟಿ ಎಂದು ತಿಳಿಸಿದ್ದಾರೆ. ಇನ್ನು 9 ಆಟಗಾರರು 1.5ಕೋಟಿಗೆ ತಮ್ಮ ಬೆಲೆಯನ್ನು ನಿಗದಿ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಆಟಗಾರರಾದ ಪ್ಯಾಟ್‌ ಕಮಿನ್ಸ್‌, ಜಾಶ್‌ ಹೇಝಲ್‌ವುಡ್‌,ಕ್ರಿಸ್‌ ಲಿನ್‌,ಮಿಚೆಲ್‌ ಮಾರ್ಷ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇನ್‌ ಮತ್ತು ಶ್ರೀಲಂಕಾದ ಏಂಜಲೊ ಮ್ಯಾಥ್ಯೂಸ್‌ 2ಕೋಟಿ ಲಿಸ್ಟ್‌ನಲ್ಲಿರುವ ಆಟಗಾರರು.

మరింత సమాచారం తెలుసుకోండి: