ಡರ್ಬನ್: ಕ್ರಿಕೆಟ್ ಪ್ರಪಂಚದಲ್ಲಿ ಟೀಂ ಇಂಡಿಯಾದೆ ಎಲ್ಲೆಲ್ಲೂ ಹವಾ. ಹೌದು, ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಭಾರತ ಟೀ ಪಂದ್ಯ, ಸರಣಿಗಳನ್ನೇ ಗೆದ್ದು ಬೀಗುತ್ತಿದ್ದರೆ, ಇತ್ತ ಟೀಂ ಇಂಡಿಯಾ ಅಂಡರ್19 ತಂಡ ನಾವೇನು ಕಮ್ಮಿಯಿಲ್ಲ  ಎಂದು ಇದೀಗ ಜಿಂಬಾಬ್ವೆ ವಿರುದ್ದ ಗೆದ್ದು ಬೀಗಿದ್ದಾರೆ. ಅಷ್ಟಕ್ಕೂ ಅದು ಯಾವ ಪಂದ್ಯ, ಹೇಗೆ ಗೆಲುವು ದಾಖಲಿಸಿತು ಗೊತ್ತಾ. ಈ ರಿಪೋರ್ಟ್ ಓದಿ. ಎಲ್ಲಾ ಮಾಹಿತಿ ತಿಳಿಯಲಿದೆ. 
 
ಟೀಂ ಇಂಡಿಯಾ ನಾಲ್ಕು ದೇಶಗಳ ಅಂಡರ್ 19 ಏಕದಿನ ಕೂಟದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ 89 ರನ್ ಭಾರಿ ಅಂತರದಲ್ಲಿ ಜಯ ಗಳಿಸಿದೆ. ಡರ್ಬನ್ ನ ಕಿಂಗ್ಸ್ ಮೇಡ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ದಿವ್ಯಾಂಶ್ ಸಕ್ಸೇನಾ ಮತ್ತು ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ 301 ರನ್ ಕಲೆಹಾಕಿತು. ಇದನ್ನು ಬೆನ್ನತ್ತಿದ ಜಿಂಬಾಬ್ವೆ ಹುಡುಗರು ಕೇವಲ 212 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು.
 
ಭಾರತದ ಪರ ದಿವ್ಯಾಂಸ್ ಸಕ್ಸೇನಾ ಭರ್ಜರಿ ಶತಕ ಬಾರಿಸಿದರು. ಸಕ್ಸೇನಾ 137 ಎಸೆತಗಳಿಂದ 128 ರನ್ ಗಳಿಸಿದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 78 ರನ್ ಗಳ ಉಪಯುಕ್ತ ಕೊಡುಗೆ ನೀಡಿದರು. ಮೊದಲ ವಿಕೆಟ್ ಗೆ ಇವರಿಬ್ಬರ ಜೋಡಿ 143 ರನ್ ಜೊತೆಯಾಟ ನಡೆಸಿದರು. ಭಾರತ 300 ರನ್ ಗಡಿ ದಾಟಿ ದಾಗಲೇ ಗೆಲುವು ನಿಶ್ಚಿತ ವಾಗಿತ್ತು. ಏಕೆಂದರೆ ಟೀಂ ಇಂಡಿಯಾ ಅಂಡರ್ 19 ಬೌಲಿಂಗ್ ಸಹ ಸ್ಟ್ರಾಂಗ್ ಇದ್ದು, ಜಿಂಬಾಬ್ವೆ ತಂಡವನ್ನು ಮಣಿಸುವ ಲೆಕ್ಕಾಚಾರಗಳು ಇದ್ದವು.  ಜಿಂಬಾಬ್ವೆ ಪರ ನಾಯಕ ಡಾಯಿನ್ ಮೈರ್ಸ್ 83 ರನ್ ಗಳಿಸಿದರೆ ಉಳಿದ ಯಾರೂ ಉತ್ತಮ ಆಟವಾಡಿದರು. ಭಾರತ ಮತ್ತು ಶುಭಾಂಗ್ ಹೆಗ್ಡೆ ತಲಾ ಮೂರು ವಿಕೆಟ್ ಪಡೆದರು. ದಿವ್ಯಾಂಶ್ ಸಕ್ಸೇನಾ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಒಟ್ಟಾರೆ ಟೀಂ ಇಂಡಿಯಾ ಅಂಡರ್ 19 ತಂಡವು ಗೆಲುವುಗಳು ದಾಖಲಿಸುತ್ತಿರುವುದು ಸಂತಸದ ವಿಷಯವಾಗಿದೆ.
 
 
 
 
 

మరింత సమాచారం తెలుసుకోండి: