ಗೂಗಲ್ ಸಂಸ್ಥೆ ಪ್ರತಿನಿತ್ಯ ಒಂದಲ್ಲಾ ಒಂದು ಆವಿಷ್ಕಾರವನ್ನು ಮಾಡುತ್ತಾ, ಅದನ್ನು ಜನರಿಗೆ ಪರಿಚಯಿಸುತ್ತಾ ತನ್ನ  ತಂತ್ರಜ್ಞಾನಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇಂದಿನ ದಿನಮಾನದಲ್ಲಿ ಗೂಗಲ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬತೆ ಜನರಲ್ಲಿ ದಿನನಿತ್ಯದ ಜೀವನದಲ್ಲಿ ಬೆರೆತು ಹೋಗಿದೆ. ಈ ಗೂಗಲ್ ನ ಪ್ರಯೋಜನವನ್ನು ಪಡೆಯದೇ ಇರುವವರೇ ಈ ಪ್ರಪಂಚದಲ್ಲಿ ಇಲ್ಲ  ಎಂಬ  ಅಂಶವನ್ನು ಮರೆಯುವಂತಿಲ್ಲ. ಈ ಒಂದು ಹಿರಿಮೆಗೆ ಮತ್ತೊಂದು ಗರಿ ಎಂಬಂತೆ ಗೂಗಲ್ ಸಂಸ್ಥೆ  ಮಕ್ಕಳಿಗೆ  ಕತೆಯನ್ನು ಹೇಳುವಂತಹ ಹೊಸ ಆಫ್ ಅನ್ನು ಬಿಡುಗಡೆಯನ್ನು ಮಾಡಿದೆ. ಅಷ್ಟಕ್ಕೂ ಗೂಗಲ್ ಬಿಡುಗಡೆಗೊಳಿಸುತ್ತಿರುವ ಆಫ್ ಯಾವುದು ಗೊತ್ತಾ..?

 

ತಂತ್ರಜ್ಞಾನದ ದೈತ್ಯ ಗೂಗಲ್​ ಈವರೆಗೆ ಜನರ ಬಳಕೆಗೆ ಯೋಗ್ಯವಾಗುವಂತಹ ಸಾಕಷ್ಟು ಆಯಪ್​ಗಳನ್ನು ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಿದೆ. ಇದೀಗ ಮಕ್ಕಳ ಕಲಿಕೆಗೆ ನೆರವಾಗಲು 'ರೀಡ್​ ಅಲಾಂಗ್'​ ಆಯಪ್​ ಅನ್ನು ಪರಿಚಯಿಸಿದೆ. ಈ ಆಯಪ್​​ ಭಾರತದಲ್ಲಿ 'ಬೋಲೊ' ಹೆಸರಿನಲ್ಲಿ ಬಿಡುಗಡೆ ಆಗಿದೆ. 'ರೀಡ್​ ಅಲಾಂಗ್'​​  ಆಫ್​​​ ಮಕ್ಕಳ  ಕಲಿಕೆಯ ಮೇಲೆ ದೃಷ್ಠಿ ಇರಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಆಯಂಡ್ರಾಯ್ಡ್​ ಆಪ್​​ ಇದಾಗಿದ್ದು, 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಸಾಕ್ಷರತೆ ಕೌಶಲ್ಯ ಅಭಿವೃದ್ಧಿ ಪಡಿಸಲು ಇದು ಸಹಾಯಕವಾಗಲಿದೆ.

ಭಾರತದಲ್ಲಿ ಪೋಷಕರ ಅಭಿಪ್ರಾಯವನ್ನು ಪಡೆದುಕೊಂಡ ನಂತರವೇ 'ರೀಡ್​​ ಅಲಾಂಗ್​' ಆಯಪ್ ಅನ್ನು ಪರಿಚಯಿಸಿದೆ. ಸದ್ಯ 180ಕ್ಕೂ ಹೆಚ್ಚು ದೇಶದಲ್ಲಿ 'ರೀಡ್​ ಅಲಾಂಗ್​' ಆಯಪ್​ ಬಳಕೆಯಲ್ಲಿದೆ. ಇಂಗ್ಲೀಷ್​​, ಸ್ಪ್ಯಾನಿಷ್​​, ಪೋರ್ಚುಗೀಸ್​​ ಮತ್ತು ಹಿಂದಿ ಭಾಷೆಯಲ್ಲಿ ಸಿಗುತ್ತಿದೆ.

'ಬೋಲೊ' ಆಯಪ್​​ 'ಬೋಲೊ​'​​ ಆಯಪ್​​ ದಿಯಾ ಫೀಚರ್​ ಸಹಾಯವನ್ನು ಪಡೆದುಕೊಂಡು ಮಕ್ಕಳ ಸ್ವತಂತ್ರ ಕಲಿಕೆಗೆ ಮತ್ತು ಓದುವ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ನೆರವು ಮಾಡುತ್ತದೆ. ಜೊತೆಗೆ ಮಕ್ಕಳು ಜೋರಾಗಿ ಓದಲು ದಿಯಾ ಗೂಗಲ್​ನ ಟೆಕ್ಟ್​​-ಟು-ಸ್ಪೀಚ್​ ಮತ್ತು ಸ್ಚೀಚ್​​ ರೆಕಗ್ನಿಷನ್​​​​ ಟೆಕ್ನಾಲಜಿಯನ್ನು ಬಳಸಿಕೊಳ್ಳುತ್ತಿದೆ. ಇದರಿಂದಾಗಿ ಮಕ್ಕಳು ಪದಗಳ ಉಚ್ಚಾರಣೆ ಮತ್ತು ಹೇಗೆ ಓದುತ್ತಾರೆ ಎಂಬುದನ್ನು ಗಮನಿಸಲು ಸಹಾಯ ಮಾಡುತ್ತದೆ.

'ರೀಡ್​ ಅಲಾಂಗ್​' ಆಯಪ್​ ಪ್ರಪಂಚದಾದ್ಯಂತ ವೈವಿಧ್ಯಮಯ ಮತ್ತು ಆಸಕ್ತಿದಾಯಕ ಕಥೆಗಳನ್ನು ತೊಡಗಿಸಿಕೊಂಡಿದೆ. ಜೊತೆಗೆ ಮಕ್ಕಳಿಗಾಗಿ ಆಟವನ್ನು ಇದರಲ್ಲಿ ನೀಡಲಾಗಿದೆ. ಮಕ್ಕಳು ಓದುತ್ತಾ, ಆಡುತ್ತಾ ಬ್ಯಾಡ್ಜ್​ಗಳನ್ನು ಸಂಗ್ರಹಿಸಬಹುದು. ಇದು ಮಕ್ಕಳನ್ನು ಓದಲು ಪ್ರೇರೆಪಿಸುತ್ತದೆ ಎಂದು ಗೂಗಲ್​ ತಿಳಿಸಿದೆ.

ಇನ್ನು ರೀಡ್​ ಅಲಾಂಗ್​ ಆಯಪ್​ ಜಾಹೀರಾತು ರಹಿತವಾಗಿದ್ದು,​ ಮಕ್ಕಳು ಇಂಟರ್​ನೆಟ್​ ಇಲ್ಲದೆ ಸಹಃ ಬಳಸಬಹುದಾಗಿದೆ. ಹೆಚ್ಚಿನ ಕಥೆಗಳಿಗಾಗಿ ಪೋಷಕರು ಇಂಟರ್​ನೆಟ್​ ಬಳಸಬೇಕಾಗುತ್ತದೆ.

మరింత సమాచారం తెలుసుకోండి: