ಕೊರೋನಾ ಸಂಕಷ್ಟ ಕಾಲದಲ್ಲಿ ಎಲ್ಲಾ ದೈತ್ಯ ಸಂಸ್ಥೆಗಳು ತಮ್ಮ ಆಸ್ತಿಗಳು ಹೆಚ್ಚಿಸಿಕೊಳ್ಳುತ್ತಿದೆ, ಇದಕ್ಕೆ ಉದಾಹರಣೆ ಎಂಬಂತೆ ರಿಲಿಯನ್ಸ್ ಜಿಯೋ ತನ್ನ ಶೇರುಗಳನ್ನು ಮಾರಾಟ ಮಾಡಿ ತನ್ನ ಆಸ್ತಿ ಮೌಲ್ಯವನ್ನು ಹೆಚ್ಚಿಸಿಕೊಂಡಿತ್ತು, ಅದೇ ರೀತಿ ಮತ್ತೊಂದು ದೈತ್ಯ ಕಂಪನಿಯೊಂದು ತನ್ನ ಶೇರುಗಳನ್ನು ಮಾರಾಟಮಾಡಿ ತನ್ನ ಮೌಲ್ಯವನ್ನು ಹೆಚ್ಚಿಸಸಿಕೊಂಡಡಿದೆ. ಅಷ್ಟಕ್ಕೂ ಆ ಕಂಪನಿ ಯಾವುದು ಗೊತ್ತಾ..?

 

ಕೊರೋನಾ ವೈರಸ್ ಬಿಕ್ಕಟ್ಟಿನ ನಡುವೆಯೇ ಭಾರತದ ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.

ಹೌದು...ಫ್ಲಿಪ್‌ಕಾರ್ಟ್ ಗ್ರೂಪ್ ತನ್ನ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಹೆಚ್ಚುವರಿ 1.2 ಬಿಲಿಯನ್ ಇಕ್ವಿಟಿ ಸ್ವತ್ತನ್ನು ಹೆಚ್ಚಿಸಿಕೊಂಡಿದೆ. ಫ್ಲಿಪ್​ಕಾರ್ಟ್​ನ ಬಹುಪಾಲು ಪಾಲುದಾರಿಕೆ ಹೊಂದಿರುವ ವಾಲ್​ಮಾರ್ಟ್​ ನೇತೃತ್ವದಲ್ಲಿ ಕಂಪನಿಯ ಇತರೆ ಷೇರುದಾರರು ಈ ಹೂಡಿಕೆ ಮಾಡಿದ್ದಾರೆ. ಇದರೊಂದಿಗೆ ಕಂಪನಿಯ ಮೌಲ್ಯ 24.9 ಬಿಲಿಯನ್ ಡಾಲರ್ ಆಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಹಣವನ್ನು ಎರಡು ಕಂತುಗಳಲ್ಲಿ ನೀಡಲಾಗುವುದು ಎಂದು ಹೇಳಲಾಗಿದೆ.

 

ಈ ಬಗ್ಗೆ ಮಾತನಾಡಿರುವ ಫ್ಲಿಪ್​ಕಾರ್ಟ್​ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ, 'ಕೊರೋನಾ ವೈರಸ್ ನಂತಹ ಸಾಂಕ್ರಾಮಿಕ ಸವಾಲಿನ ಸಮಯದಲ್ಲಿ ನಾವು ನಮ್ಮ ಸಂಸ್ಥೆಯನ್ನು ಸದೃಢವಾಗಿ ಬೆಳೆಸುವುದಕ್ಕೆ ಮತ್ತು ಭಾರತೀಯರ ಅವಶ್ಯಕತೆಗಳನ್ನು ಪೂರೈಸುವಿಕೆ ಹೆಚ್ಚುತ್ತಿರುವುದರಿಂದ ನಮ್ಮ ಷೇರುದಾರರು ಬೆಂಬಲವಾಗಿ ನಿಂತಿದ್ದಕ್ಕೆ ಅವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಹೇಳಿದ್ದಾರೆ.

 

ಅಂತೆಯೇ ಫ್ಲಿಪ್‌ಕಾರ್ಟ್‌ನಲ್ಲಿ ವಾಲ್‌ಮಾರ್ಟ್‌ ಹೂಡಿಕೆ ಆರಂಭ ಆದಾಗಿನಿಂದಲೂ ನಮ್ಮ ತಂತ್ರಜ್ಞಾನ, ಪಾಲುದಾರಿಕೆ ಮತ್ತು ಹೊಸ ಸೇವೆಗಳ ಮೂಲಕ ನಾವು ನಮ್ಮ ಕೊಡುಗೆಯನ್ನು ಹೆಚ್ಚು ವಿಸ್ತರಿಸಿಕೊಂಡಿದ್ದೇವೆ. ಇಂದು, ನಾವು ಎಲೆಕ್ಟ್ರಾನಿಕ್ಸ್ ಮತ್ತು ಫ್ಯಾಷನ್‌ನಲ್ಲಿ ಹೆಚ್ಚು ಮುನ್ನಡೆಯುತ್ತಿದ್ದೇವೆ. ಮತ್ತು ನಮ್ಮ ಗ್ರಾಹಕರಿಗೆ ತಡೆರಹಿತ ಪಾವತಿ ಮತ್ತು ವಿತರಣೆ ಇತರೆ ಸಾಮಾನ್ಯ ಸರಕು ವಿಭಾಗಗಳು ಮತ್ತು ದಿನಸಿಗಳಲ್ಲಿ ಪಾಲನ್ನು ಹೆಚ್ಚಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ 200 ಮಿಲಿಯನ್ ಭಾರತೀಯ ವ್ಯಾಪಾರಿಗಳನ್ನು ಆನ್‌ಲೈನ್‌ ವ್ಯವಸ್ಥೆಯಡಿ ತರುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

 

2007 ರಲ್ಲಿ ಸ್ಥಾಪನೆಯಾದ ಫ್ಲಿಪ್‌ಕಾರ್ಟ್ ಸಮೂಹವು, ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್​ಗಳಾದ ಫೋನ್ ಪೇ, ಫ್ಯಾಶನ್ ಸ್ಪೆಷಾಲಿಟಿ, ಮತ್ತು ಇ-ಕಾರ್ಟ್ ಅನ್ನು ಒಳಗೊಂಡಿದೆ. ಮತ್ತು ದ್ವಿತೀಯ ಮತ್ತು ತೃತೀಯ ದರ್ಜೆಯ ಭಾರತದ ನಗರಗಳ ಕೊನೆಯ ಮೈಲಿಯವರೆಗೆ ಸರಕು ಸೇವೆಯನ್ನು ಒದಗಿಸುವ ಲಾಜಿಸ್ಟಿಕ್ಸ್ ಮತ್ತು ವಿತರಣಾ ಸಂಸ್ಥೆಯಾಗಿದೆ. ಫ್ಲಿಪ್​ಕಾರ್ಟ್​ನಲ್ಲಿ ವಾಲ್​ಮಾರ್ಟ್​ 16 ಬಿಲಿಯನ್​ ಹೂಡಿಕೆ ಮಾಡುವ ಮೂಲಕ ಕಂಪನಿಯ ಬಹುಪಾಲು ಷೇರಗಳನ್ನು ಹೊಂದಿದೆ.

 

మరింత సమాచారం తెలుసుకోండి: